Sunday, July 12, 2009

ಹುಲಿಮರಿ ದರ್ಶನ .

"ಮಾಣಿ ಇವತ್ತು ಗಿರಿಯನ್ ಸಂತಿಗೆ ಹೋಗಿ ಆಕಳು ಕರನ ತರವೋ " ಅಪ್ಪನ ಆಜ್ಞೆಯಿಂದ ಆಗಲೇ ಅನ್ನಿಸ್ತು ಇವತ್ತು ಅರ್ದ ದಿನ ಇದೆ ಕೆಲಸ ಎಂದು .. ಅಂತು ಇಂತೂ ಗಿರಿಯ ಬಂದಿದ್ದ ಅವನ ಜೊತೆ ಕೆನ್ಗ್ರೆ ಹೊರಟೆ .. ದಾರಿ ಮಧ್ಯ ಅದು ಇದು ಹಣ್ಣು ತಿಂದು ಹೋಗುವಸ್ಟರಲ್ಲಿ ದನ ಅದರಕರು ನಮ್ಮ ಜೊತೆ ಬರಲು ಹೊರಟಿ ನಿಂತಿದ್ದವು ... ಇನ್ನೇನು ಸ್ವಲ್ಪ ಸುಧರಿಸಿಕೊಳ್ಳುವದರಲ್ಲಿಗಿರಿಯ ಹೊರಟಾಗಿತ್ತು . ಸರಿ ಎಂದು ನಾನು ತಲೆ ಓಡಿಸಿ ಹೇಳಿದೆ " ಕರ ನಾ ಹಿಡ್ಕಟ್ಟಿ ದನ ನೀ ಹಿಡ್ಕ" ಅಂದೆ . ಅಬ್ಭಾ ಸಣ್ಣ ಕರನಆರಾಮಾಗಿ ಹಿಡಿಯಬಹುದು ಅಂತ ಹೊರಟರೆ ಸ್ವಲ್ಪ ಸಮಯದಲ್ಲಿ ಅದು ತನ್ನ ಬಲವನ್ನು ಬಿಚ್ಚಿತ್ತುಈ ಕರು ಗಳಿಗೆ ಅದೇನೋ ಮೊದಲ ಬಾರಿಗೆ ಹೊರಗೆ ಬಿಟ್ಟಾಗ ಸಿಕ್ಕಾಪಟ್ಟೆ ಓದುವ ಹುಚ್ಚು .. ಅದೋ ಒಳ್ಳೆ ಜಿಂಕೆಯಂತೆ ಕುಣಿದು ಓಡಲುಶುರು ಮಾಡಿತು . ಅದನ್ನು ಹಿಡಿದು ಮನೆಗೆ ಬರುವಸ್ಟರಲ್ಲಿ ಸಾಕಾಗಿತ್ತು. ಅದನ್ನು ಅಲ್ಲೇ ಹೊರಗೆ ಬೇಲಿಗೆ ಕಟ್ಟೋಣ ಅಂತ ಅಲ್ಲೇ ಕಟ್ಟಿದ್ದೆ .. ಮರುದಿನ ನಮ್ಮ ಮನೆಯಲ್ಲಿ ದೇವಕಾರ್ಯ ಇತ್ತು ಅನ್ಸುತ್ತೆ . ಯಾವತ್ತಿನ ಹಾಗೆ ನೆಂಟರು , ಊರಿನವರು ಬಂದಿದ್ದರು.



ಹಾಗೆ ಪಕ್ಕದ ಊರಿನ ಸಣ್ಣಜ್ಜಿಯು ಬಂದಿದ್ರು. ನನಗೋ ಕೆಲವು ಅಜ್ಜಿಯರನ್ನೇ ನೋಡಿದ್ರೆ ಉರಿದು ಹೋಗುತ್ತೆ. ಸುಮ್ನೆ ಇರೋದು ಬಿಟ್ಟು ಇದ್ದಿದರಲ್ಲೆಲ್ಲ ತಲೆ ಹಾಕುತ್ತಾರೆ . ಹಾಗೆ ಈ ಅಜ್ಜಿನು ಕದ್ದು ಕೇಳುವುದು , ಎಲ್ಲ್ಲ ಕಡೆ ತಮ್ಮ ಅಭಿಪ್ರಾಯ ತಿಳಿಸುವುದು ಇತ್ಯಾದಿ.. ಗುಣಗಳು ಇತ್ತು.

ಹೋಗಲಿ ಮದ್ಯಾನ್ಹ ಊಟ ಮಾಡಿ ಎಲ್ಲರು ಹೊರಗಡೆ ಕಟ್ಟೆಯಲ್ಲಿ ಹರಟೆ ಹೊಡೆಯುತ್ತ ಇದ್ದೆವು. ಅಸ್ಟರಲ್ಲಿ ಅಮ್ಮ ಮಡಿದ ಚಹಾ , ಸಂಡಿಗೆ ಎಲ್ಲವು ಬಂತು . ತಿನ್ನುತ್ತಾ ಇರಬೇಕಾದ್ರೆ ಅಚೆಮ್ಮನೆ ಶಂಕರ "ಹೊಯ್ ಅದೆಂತೋ ಆ ನಂನಿ ಹಾರಡ್ತು ಅದು " ನಿನ್ನೆ ತಂದ ಕರುವಿನ ಅರ್ಭಟ ನೋಡಿ ಅವ್ನ ಪ್ರಶ್ನೆ . ಅ ಕರುವೋ ದಾರಿಯಲ್ಲಿ ಹೋಗುತ್ತಿದ್ದವರಿಗೆಲ್ಲ ಹೊರಿಯುವುದು , ಆಚೆ ಈಚೆ ಕುಣಿಯುವುದು ಮಾಡ್ತಿತ್ತು . ನಾನು ಆಗ ಶಂಕರನಿಗೆ " ಹೇ ಹುಲಿ ಮರಿ ಸಕಿದ್ಯ ನೋಡು ಆ ನಂನಿ ತ್ರಾಸ್ ಕೊಡ್ತು " ಅಂದೆ .. ಅಸ್ತರಲ್ಲೇ ಕಿಡಕಿಯ ಹಿಂದೆ ಯಾರೋ ಅವ್ರಸ್ತಕ್ಕೆ " ರಾಮ ರಾಮ ಈ ಮಾಣಿಯಕ್ಕಗೆ ಬೇರೆ ಕೆಲಸ ಇಲ್ಲೇ .. ಹುಲಿಮರಿ ಸಾಕಿದ್ದ "



ಅಂತ ಅಂದಾಗ ಓಹೋ ಇದು ಸಣ್ಣಜ್ಜಿ ಅಂತ ಗೊತ್ತಾಗಿತ್ತು . ಊಟ ಮುಗ್ಸಿ ಮಲಗಿದ್ದ ಅವರು ಆಗ ತಾನೆ ಎದ್ದರು ಅನ್ಸುತ್ತೆ . ಅರ್ಧಮ್ ಬರದ ಕೇಳಿತ್ತು ಅವ್ರಿಗೆ . ಸುಮ್ನೆ ಯಾರು ಅವ್ರಿಗೆ ತಿಳಿಸಿ ಹೇಳ್ತಾರೆ ಅಂತ ಸುಮ್ಮನಾದೆ .





ಆಗ್ಲೇ ಸಂನಜ್ಜಿನ ಅವ್ರ ಮಗ ಬಂದು ಮನೆಗೆ ಕರ್ಕೊಂಡು ಹೊರತಾಗಿತ್ತು. ನಾವೆಲ್ಲ ಅವತ್ತು ಗುಡ್ಡ ಹೊಳೆ ತಿರುಗಾಡಿ ಸಂಜೆ ಮನೆಗೆ ಬರುವಸ್ಟರಲ್ಲಿ ಪಕ್ಕದ ಊರವರೆಲ್ಲ ನಮ್ಮ ಮನೆ ಹತ್ರ .. ಏನಪ್ಪಾ ಇದು ಅಂತ ಬಂದ್ರೆ .... " ಹೊಯ್ ಶರತ್ತೋ ಹುಲಿ ಮರಿ ಸಕಿದ್ಧಾ ಹೊವ್ದನೋ" ಅಂದ ಈಶಣ್ಣ. ನನಗೋ ನಗು ತಡಿಯಲು ಆಗ್ತ ಇಲ್ಲ . ಎಲ ಅಜ್ಜಿ ಸುಮ್ನಿರೋದು ಬಿಟ್ಟು ಊರವರಿಗೆಲ್ಲ ಹೇಳಿದ್ಯಲ್ಲ ಅಂದ್ಕೊಂಡೆ . ನೋಡಿದ್ರೆ ಈ ಭೂಪರು ಮಕ್ಕಳು ಮರಿ ಮುದಕ್ರು ಎಲ್ಲರನ್ನು ಕರ್ಕೊಂಡು ಬಂದಿದ್ರು. ಅಸ್ತೊತ್ತಿಗೆ ರಾಮಜ್ಜ " ಹೇಯ್ ತೋರ್ಸೋ ಮಾರಾಯ ನೋಡ್ಕ್ಯಂಡು ಹೋಗ್ತ್ಯ .. ಕತ್ತಲಗ್ತು ಅಂದ " .. ನಾನು " ನಿಂಗ ಎಲ್ಲ ನಡ್ಕಂಡು ಬಂದಿದ್ದ" ಅಂದೆ.. ಎಲ್ಲರು ತಲೆ ಆಡಿಸಿದರು. ನನಗೋ ಇವರ ಜೊತೆ ಒಂದು ಆಟ ಆಡುವ ತವಕ ... ಸುಮ್ಮನಿರದೆ ನಾನು " ಈಗ ಮಾತ್ರ ಅದಕ್ಕೆಹಾಲು ಕುದ್ಸಿ ಮಲ್ಗ್ಸಿದ್ಯ ... ಭಾರಿ ಸಣ್ಣ ಮರಿ ಈಗ ಎಬ್ಸಿದ್ರೆ ತೊಂದ್ರೆ ಆಗ್ತು ... ಅದು ಕೂಗಲ್ಲೇ ಶುರು ಹಚ್ಚಿದರೆ ಮುಗುತ್ತು .. ರಾತ್ರಿ ಇಡಿ ಯಾರಿಗೂ ನಿದ್ದೆ ಇಲ್ಲೇ ಅಂದೆ "
ಆ ಊರವರು ಅದೆಂತ ಬುದ್ದಿವನ್ತರೋ ನಾನು ಹೇಳಿದ್ದನ್ನ ತಟ್ಟನೆ ನಂಬಿದರು ." ನಾಳೆ ಬೆಳಗ್ಗೆ ಬನ್ನಿ " ಅಂದೆ ... ಎಲ್ಲರು ಮನೆಗೆ ಹೊರಟಾಗ ನಂಗೆ ಒಳಗೊಳಗೇ ಖುಷಿ ... ಪಾಪ ಅವರೆಲ್ಲ ಯಾವಾಗ ಬೆಲ್ಗಗುತ್ತೋ ಅಂತ ಕಾದಿದ್ದರು ಅನ್ಸುತ್ತೆ . ಮಕ್ಕಳೆಲ್ಲ ಅವ್ರ ಜೊತೆ ಅದಲು ಕೊಡಬೇಕು ಅಂತನು ಹೇಳಿದ್ರು . ನಾನು ಎಲ್ಲದಕ್ಕೂ ಹ್ಞೂ ಎಂದು ಅವ್ರನ್ನ ಮನೆಗೆ ಕಲ್ಸಿದ್ದೆ .

ಮರುದಿನ ಬೆಳಗ್ಗೆ ಯಾರು ಬರೋದಿಲ್ಲ ಅಂತ ನಾನು ಅಂದ್ಕೊಂಡು ಆರಾಮಾಗಿ ದೋಸೆ ತಿಂತ ಇದ್ದಾಗ ಹೊರಗೆ ಮತ್ತೆ ಮಾತಿನ ಸದ್ದು .. ಬೇಗ ಬೇಗ ತಿಂದು ಓದಿ ಬಂದು ನೋಡಿದ್ರೆ ಎಲ್ಲ ಭೂಪರು ಮತ್ತೆ ಹಾಜರ್ . ಇವರಸ್ತು ಸಮಯಪ್ರಜ್ಞೆ ಇದ್ದವರು ಯಾರು ಇಲ್ಲ ಅನ್ಸುತ್ತೆ . ಅಸ್ಟರಲ್ಲಿ ಅಮ್ಮ ಒಳಗೆ ಕರೆದು ಇದೆಲ್ಲ ಸಾಕು ನಿಜ ಹೇಳಿ ಮುಗ್ಸು ಅಂದರು, ಅಮ್ಮ " ಎಲ್ಲವ್ಕುಚಹಾ ಮಾಡಲ " ಅಂದ್ರೆ ಬೇಡ " ಹುಲಿ ನೋದಕ್ಯ ಹೋಗ್ತ್ಯ " ಅನ್ನೋದೇ .

ನಾನು ನಿಧಾನವಾಗಿ ಹೇಗಾದರು ತಪ್ಪಿಸ್ಕೊಲ್ಬೇಕಲ್ಲ ಅಂತ " ಇಲ್ಲಿ ಹುಲಿ ಇದದ್ದು ಅಂತ ಯಾರು ಹೇಳಿದ್ದ ಅಂದೆ " ಎಲ್ಲರೂ ಒಬರನ್ನೋಬರು ತೋರಿಸ್ತಾ ಕೊನೆಗೆ ಅದು ಮುಟ್ಟಿದ್ದು ಸಣ್ಣಜ್ಜಿ ಕಡೆಗೆ . ನಾನು ಅಜ್ಜಿನ ಕೇಳಿದೆ " ನ ನಿಂಗೆ ಬಂದು ಹುಲಿ ಸಕಿದ್ದಿ ಹೆಲಿಡ್ನನೆ " ಅಂದೆ ಅಜ್ಜಿ ಅದೇನು ಗೊಣಗಿಡ್ರೋ ಗೊತ್ತಿಲ್ಲ ಊರವರೆಲ್ಲ ಅಜ್ಜಿಗೆ ಒಂದಿಸ್ತು ಬೈದು ಸುಮ್ಮನಾದರು ... ನನ್ನ ಕಡೆ ತಿರುಗಿ ಏನು ಅನ್ನೋ ಮುಖ ತೋರಿಸಿದರು .. ನಾನು ನಡೆದ್ದನ್ನೆಲ್ಲ ಹೇಳಿದಾಗ ಅವ್ರಿಗೆ ನಗುವೋ ನಗು ... ಬಂದಿದ್ದಿವಲ್ಲ ಅಂತ ಕೊನೆಗೆ ಆ ಹುಲಿ ಮರಿಯ ಸ್ವರೂಪ ದನದ ಕರುವನ್ನು ನೋಡಿ ... ಮನೆ ಕಡೆ ಹೆಜ್ಜೆ ಹಾಕಿದರು ... ಹುಲಿ ಮರಿ ತೋರ್ಸು ಅಂತ ಕೊಗುತ್ತಿದ್ದ ಒಂದೆರಡು ಚಿಳ್ಳೆ ಪಿಲ್ಲೆಗಳಿಗೆ ಹೊಡೆತದ ರುಚಿಯು ಸಿಕ್ಕಿತ್ತು ... ಅಂತು ಆ ಎರಡು ದಿನ ನಮಗೆಲ್ಲ ಮಜವೋ ಮಜಾ ..

ಇಂದಿಗೂ ನಾವು ಈ ವಿಚಾರ ನೆನಪಿಸಿಕೊಂಡು ನಗುತ್ತೇವೆ . ಆದರು ಆ ಒರವರು ಬಹಳ ದೊಡ್ಡ ಮನಸ್ಸಿನವರು . ಇದೆ ಬೇರೆಲ್ಲದ್ರು ಆಗಿದ್ರೆ ಒಂದೆರಡು ವಧೆ ನಂಗೆ ಬೀಳ್ತಿತ್ತೆನೂ ....




















1 comments:

Vikas G B said...

Channagi bardidiya. Keep the good work going.

G B