ಮಳೆಗಾಲದ ಮುಂಜಾನೆ ೬ ಗಂಟೆ , ಏಳಲು ಮನಸ್ಸಿಲ್ಲ , ಅಮ್ಮ ಹೇಳಿದರು ಅಂತ ತಮ್ಮನ ಕಾಟ ಏಳಲು ... ಅಂತು ಇಂತೂ ಎದ್ದು ಹಾಸಿಗೆ ಮಡಚಿ ಕೆಳಗಿಳಿದು ಬರುತ್ತಿದ್ದಾಗ ನೆನಪಾಯಿತು ಇವತ್ತು ಮನೆಯಲ್ಲಿ ಅಜ್ಜನ ಶ್ರದ್ಧಾ ಎಂದು . ಒಳಗೆ ಹೋದರೆ ಅವತ್ತಿನ ಮೆನು ಆಗಲೇ ಸಿದ್ಧವಾಗಿತ್ತು . ಅಲ್ಲಿ ಏನೋ ತಿನ್ನಲು ಕಂಡು ಕೈ ಆ ಕಡೆ ಹೋದಾಗ ಮಡಿ ಮಡಿ ಎಂದು ನನ್ನ ಆಚೆ ಓಡಿಸಿಯಗಿತ್ತು . ಮನಸಿನಲ್ಲೇ ಬೈದುಕೊಂಡು ಬಚ್ಚಲು ಮನೆ ಕಡೆ ಹೆಜ್ಜೆ ಹಾಕಿದರೆ ಅಲ್ಲೆಲ್ಲಾ ಅವ್ಸರದವರು ತುಂಬಿದ್ದರು . ಅಂತು ಇಂತೂ ನನ್ನ ನಿತ್ಯ ಕರ್ಮ( ಸ್ನಾನ ಮಾಡುವುದು ನಿತ್ಯದ ಕರ್ಮ ) ಮಾಡಿ ಬಂದಾಗ ಅಪ್ಪನ ಮಾತು ಕೇಳಿತು " ಶಾಲಿಗೆ ಹೋಗವು ನೆನಪಿದ್ದ " .. ಆಗಲೇ ನನ್ನ ತಮ್ಮ , ದೊಡ್ಡಪ್ಪನ ಮಕ್ಕಳು ಶಾಲೆಗೆ ಹೊರಡಲು ಸಿದ್ಧವಾಗಿದ್ದು ಕಂಡಿತು . ಬೇಗ ಬೇಗ ಅವಲಕ್ಕಿ ತಿಂದು ಡ್ರೆಸ್ ಹಾಕ್ಕೊಂಡು ಮುಂದೆ ಮುಂದೆ ಹೊರಟಿದ್ದ ಅಣ್ಣಯ್ಯನನ್ನು ಕೂಗುತ್ತಾ ಓಡಿದೆ .
ದಾರಿಯಲ್ಲೆಲ್ಲ ಮನೆಯ ಕಡೆ ಮನಸು. ಏನೇನು ಸಿಹಿ ಮಾಡಿರಬಹುದು , ಯಾರ್ಯಾರು ಬಂದಿರಬಹುದು , ಅವ್ರು ಚಾಕಲೇಟ್ ತಂದಿರ್ಬಹುದ ?? ನಾನೊಬ್ಬನೇ ಹೇಗೆ ತಿನ್ನಬಹುದು ?? ಎಲ್ಲ ತಲೆಯೊಳಗೆ ಹೊಕ್ಕು ಶಾಲೆಯ ಕಡೆ ಕಾಲು ಹೋಗ್ತಾನೆ ಇಲ್ಲ.
ಅವತ್ತೋ ಮಳೆಯು ತುಂಬ ಕಡಿಮೆ . ಎಲ್ಲೆಲ್ಲು ಮಂಜು.. ನಾವು ಹತ್ತಿ ಇಳಿಯಬೇಕಿದ್ದ ಗುಡ್ಡ ಕಣ್ಣ ಮುಚ್ಚಾಲೆ ಆಡಲು ಅಡಗಿದಂತಿತ್ತು.
ಏನಾದರು ಮಾಡಿ ಶಾಲೆಗೆ ಚಕ್ಕರ್ ಹಾಕಬೇಕಲ್ಲ ಅಂತ ತಲೆ ಕರ್ಚ್ ಮಾಡಿದ್ದೂ ಬಂತು ಉಹುನ್ ಏನು ಆಗ್ಲಿಲ್ಲ . ಪಾತಾಳ ಅಗಳ ( ದೊಡ್ಡ ಕೊರಕಲು.ಮಳೆಗಾಲದಲ್ಲಿ ನೀರು ಹೋಗಿ ಆಗಿದ್ದು. ಅದನ್ನು ಮೇಲಿನಿಂದ ನೋಡಿದರೆ ತಳ ಕಾಣದಸ್ತು ಅಳ ) ಬಂದಿದ್ದೆ ನನ್ನ ನಾಟಕ ಶುರುವಾಯಿತು. ಇವತ್ತು ನನಗೆ ತಲೆ ತಿರುಗು ಬರ್ತಾ ಇದೆ ಇಸ್ಟ್ ಉದ್ದ ದಾಟಿದರೆ ನಾನು ಬಿದ್ದು ಹೋಗ್ತೇನೆ .. ಮನೆಗೆ ಹೋಗೋದು ಉಚಿತ ಅಂತ ರಾಗ ತೆಗೆದೆ .ನನ್ನ ಅಣ್ಣನಿಗೆ ಗೊತ್ತಿತ್ತು ಈ ಪ್ಲಾನ್ . ಸುಮ್ನೆ ನಡಿ ನಾನು ಹಿಡ್ಕೊತೇನೆ ಅಂತ ದಾಟಿಸಿಯು ಆಗಿತ್ತು .
ಅಸ್ಟರಲ್ಲಿ ಜಿನುಗು ಮಳೆ ಶುರುವಾಯಿತು. ನಾನು ಮನಸಲ್ಲೇ ಜೋರಾಗಿ ಮಳೆ ಬರ್ಲಪ್ಪ ಶಾಲೆಗೆ ರಜೆನದ್ರು ಕೊಡಲಿ ಅಂತ ಕೇಳ್ಕೊಂಡೆ . ಶಾಲೆಯ ಮುಖ ಕಂಡಾಗ ಪ್ರಾರ್ಥನೆಗೆ ಎಲ್ಲ ನಿಂತಂತಿತ್ತು. ಎಲ್ಲರು ಗಡಿಬಿಡಿಯಲ್ಲಿ ಓಡಿ ನಿಂತೆವು . ನನ್ನ ಕಣ್ಣು ಶಾಲೆಯ ಅಂಗಳದ ತುದಿಗೆ ನೆಟ್ಟಿತ್ತು . ಕ್ಲಾಸಲ್ಲಿ ಜೋಷಿ ಮಾಸ್ತರದ್ದು ಕನ್ನಡ ಬೋಧನೆ . ಎಸ್ಟ್ ಹೊತ್ತಿಗೆ ಮುಗಿಯತ್ತೋ ಅಂತ ಚಿಂತೆ .. ಕಣ್ಣು ಕ್ಲಾಸಿನ ಹೊರಗೆ ಮಳೆಯ ಬರುವಿಗಾಗಿ, ಮನಸ್ಸು ಮನೆಯ ಕಡೆ , ಹೊಟ್ಟೆ ಸೀದಾ ಅಡುಗೆ ಮನೆಯಲ್ಲೇ ನೆಟ್ಟಿತ್ತು !!!
ನನ್ನ ಸುಪ್ತ ಮನಸ್ಸಿಗೆ ಎಲ್ಲಿಂದಲೋ ಒಂದು ಮಾಸ್ಟರ್ ಪ್ಲಾನ್ ಹೊಕ್ಕಿತ್ತು. ಈ ಕನ್ನಡ ಮಾಸ್ತರ್ ಬೇಗ ಮುಗಿಸಿ ಹಾಳಾಗಿ
ಹೋಗ್ಲಿ ಅಂತ ಕಾಯ್ತಾ ಇದ್ದೆ . ನನ್ನ ಪ್ಲಾನ್ ನಡೆಸಲು ಇನ್ನು ಕೇವಲ ೫ ನಿಮಿಷ ಬಾಕಿ . ಹೊರಗಡೆ ನೋಡಿದೆ ಇನ್ನು ಜಿನುಗು ಮಳೆ . ಬೆಲ್ ಆಗಲು ಕಾಯ್ತಾ ಇದ್ದೆ ಅಸ್ಟರಲ್ಲಿ ಮಾಸ್ತರ ಒಂದು ದೊಡ್ಡ ಬಾಂಬ್ ಇಟ್ಟೇ ಬಿಟ್ಟರು. ಗಣಿತ ಮಾಸ್ತ್ರರ್ರು ಬರ್ದಿದ್ದಕ್ಕೆ ನಾನೆ ಮುಂದಿನ ಕ್ಲಾಸ್ ತಗೋತೇನೆ ಎಂದು . ನನ್ನ ಅಸೆಯೆಲ್ಲ ನುಚ್ಹು ನೂರಾಗಿತ್ತು. ನಮಗೆ ಇದ್ದ ಒಂದು ತೊಂದರೆ ಅಂದ್ರೆ ಮದ್ಯಾನ್ಹ ಊಟಕ್ಕೆ ಮನೆಗೆ ಬರಲು ದೂರ . ಅಲ್ಲೇ ಪಕ್ಕದಲ್ಲಿದ ಸಂನಜ್ಜನ ಮನೆಗೆ ಊಟಕ್ಕೆ ಹೋಗುವುದು ಅಭ್ಯಾಸ. ಇವತ್ತು ಆಗೋಲ್ಲ ಮನೆಯಲ್ಲಿ ಸಿಹಿ ಊಟದ ಅಸೆ . ಈ ಕನ್ನಡ ಮಾಸ್ತರಿಗೆ ಬೇರೆ ಕೆಲಸ ಇಲ್ಲ ಅಂತ ಅವ್ರಿಗೆ ಶಾಪ ಹಾಕಿದ್ದೆ ಬಂತು.
ಮದ್ಯಹ್ನ ೧೨ ಗಂಟೆ . ಎಲ್ಲರಿಗು ೫ ನಿಮಿಷದ ಬ್ರೆಅಕು . ಮಾಸ್ತರೆಲ್ಲ ಅವರಸ್ತಕ್ಕೆ ಮಾತಾಡ್ತಾ ಇದ್ದರೆ .. ಎಲ್ಲರು ಅವ್ರಸ್ತ್ಕ್ಕೆ ಮಾತಾಡ್ತಾನೋ , ಜಗಳ ಮಾಡ್ತಾನೋ ಇದ್ದರು. ಹೊರಗಡೆ ಮಳೆ ನಿಧಾನಕ್ಕೆ ಜೋರಗ್ತಾ ಇದೆ. ನನ್ನ ಕಣ್ಣೆಲ್ಲ ಅಂಗಳದ ತುದಿಯಲ್ಲಿರುವ ಮಳೆ ಮಾಪಕದ ಮೇಲೆ . ಅದು ಯಾವತ್ತು ತುಮ್ಬುತ್ತೋ ಅವತ್ತು ಜೋರು ಮಳೆ ಅಂತ ರಜ ಕೊಡೋರು . ಎಸ್ಟದ್ರು ಇದು ತುಂಬ್ತಾ ಇಲ್ಲ .. ನನ್ನ ತಲೆ ಕೆಟ್ಟೋಯ್ತು . ಆಗಿದ್ದಗ್ಲಿ ಅಂತ ಪಾಟೀಚೀಲ ಬೆನ್ನಿಗೆ ಹಾಕ್ಕೊಂಡು ಓಡಿ ಹೋಗಿ ಆ ಮಳೆ ಮಾಪನಕ್ಕೆ ಉಚ್ಚೆ ಹೊಯ್ದು ತುಮ್ಬಿಸಿಬಿಟ್ಟೆ . ಜೋರಾಗಿ " ಎಲ್ಲ ಮನಿಗೆ ಹೊಪಲ್ಲೇ ಅಡ್ಡಿಲ್ಲೆ ಇದು ತುಂಬಿ ಹೋತು " ಅಂತ ಕೂಗಿ ಮನೆ ಕಡೆ ಓಡಿದೆ . ನನ್ನನ್ನು ಯಾರದ್ರು ನಮ್ಬಿದರ ಅಂತ ಹಿಂದಿರುಗೆ ನೋಡಿದ್ರೆ ಶಾಲೆಯ ಮುಕ್ಕಾಲು ಭಾಗ ಹೊರತಾಗಿತ್ತು . ಸುಮಿತ್ರ ಅಕ್ಕೋರು ಒಂದೆರಡು ಚಿಳ್ಳೆ ಪಿಳ್ಳೆಗೆ ಬೆತ್ತದ ರುಚಿ ತೋರ್ಸಿದ್ದು ನೋಡಿ ಮನೆ ಕಾಣೋ ವರೆಗೂ ಓಡಿಯಗಿತ್ತು.
ಅವತ್ತು ಮನೆಯಲ್ಲಿ ಅಪ್ಪ ಅಮ್ಮ ಕಾರ್ಯಕ್ರಮದಲ್ಲಿ ಮುಳುಗಿದ್ದರಿಂದ ನಾನು ನಿಧಾನಕ್ಕೆ ಊಟದ ಮನೆಯಲ್ಲಿ ಪಾಯಸ್ ತಿಂತ ಇದ್ದೆ .ಅಪ್ಪ ಒಂದು ಸಲ ನನ್ನ ನೋಡಿ ಕಣ್ಣು ಬಿತ್ತಿತ್ದ್ದು ನೆನಪಿದೆ .. ನಂತರ ಅಪ್ಪನಿಗೆ ನೆನಪು ಮಾಡದಿರಲಿ ಅಂತ ನೆಂಟರು ತಂದಿದ್ದ ಚಾಕಲೇಟ್ ನಲ್ಲಿ ಬಹಳಷ್ಟು ತಮ್ಮನಿಗೋ, ಅನ್ನನಿಗೋ ಕೊಟ್ಟು ಅವ್ರ ಬಾಯಿ ಮುಚ್ಹಿಸಿ ಬಚಾವಾದೆ ...
ಈಗಲೂ ನನ್ನ ಆ ಅಧ್ಬುತ ಐಡಿಯಾ ಅದೆಲ್ಲಿಂದ ಬಂತೋ ಅಂತ ಅನ್ನಿಸುತ್ತೆ ಒಟ್ಟಿಗೆ ನಾನು ಮಾಡಿದ್ದನ್ನು ನೆನಪಿಸಿಕೊಂಡು ನಗುವು ಬರುತ್ತೆ. ಈಗಲೂ ಆ ಶಾಲೆಗೆ ಹೋದರೆ ಮಳೆ ಮಾಪನ ನೋಡಬಹುದು. ನನಗೆ ನೆನಪಿದ್ದ ಹಾಗೆ ಆ ಮಳೆಗಾಲವೇ ಅದಕ್ಕೆ ಕೊನೆ .. ಕೊನೆಗೆ ಯಾರು ಅದನ್ನು ಉಪಯೋಗಿಸಿಲ್ಲ :)
ನನ್ನ ಮನೆ ಇರೋದು ಮಲೆನಾಡಿನ ಒಂದು ಪುಟ್ಟ ಗ್ರಾಮದಲ್ಲಿ ... ಮನೆಯ ಪಕ್ಕದಲ್ಲೇ ಒಂದು ದೊಡ್ಡ ಹೊಳೆ .. ನನಗೋ ಚಿಕ್ಕದಿನಿಂದಲೂ ಹೊಳೆಯ ಆಚೆ ಏನಿದೆ ಅನ್ನೋದೇ ಒಂದು ದೊಡ್ಡ ವಿಸ್ಮಯ ... ಅದೇನೇ ಇರಲಿ ನನ್ನ ಜೀವನದ ಮರೆಯಲಾರದ ಘಟನೆಗಳು ನಡೆದಿದ್ದು ಒಂದೋ ಮನೆಯಲ್ಲಿ ಇಲ್ಲ ಹೊಳೆಯ ಆಚೆಗಿನ ಜಗತ್ತಿನಲ್ಲಿ ... ಅದೇ ನೀರಿನಾಚೆ .. ಮನೆಯ ಒಳಗೆ ....
About Me
- ಶರತ್ ಹೆಗಡೆ
- ಶಿರಸಿ, ಕರ್ನಾಟಕ, India
- ಹೆಸರು ಶರತ್ . ಊರು ಶಿರಸಿ . ಇದ್ದಿದ್ದು ಯೆಲ್ಲಾಪುರ , ಶಿರಸಿ, ಧಾರವಾಡ ,ಮಂಗಳೂರು , ಮೈಸೂರು ಈಗ ಬೆಂಗಳೂರು ... ನನಗೆ ಹೊಸ ಹೊಸ ಊರುಗಳನ್ನು ನೋಡುವುದು , ಅಲ್ಲಿನ ಜನರನ್ನು ಭೇಟಿಯಾಗುವುದು , ಟ್ರೆಕ್ಕಿಂಗ್ ಇತ್ಯಾದಿ ಹವ್ಯಾಸಗಳು ... ಸದ್ಯಕ್ಕೆ ಬ್ಲಾಗಾಯಣವನ್ನು ಶುರು ಮಾಡ್ಕೊಂದಿದೇನೆ .. ನೋಡೋಣ ನಿಮ್ಮೆಲ್ಲರ ಆಶಿರ್ವಾದ ಇದ್ದರೆ ಆಯಿತು...

0 comments:
Post a Comment