Tuesday, October 6, 2009

ಸಂನಜ್ಜಿಯ ಖಾರದ ಟೂತ್ ಪೇಸ್ಟು ....


"ಶ್ರೀ ರಾಮ್ ಜಯ ರಾಮ್ ಜಯ ಜಯ ರಾಮ್ " ಮನೆಯಲ್ಲಿ ಬೆಳಿಗ್ಗೆ ೫ ೩೦ ರಾಮ ನಮ ಕೇಳಿತು ಅಂದರೆ ಸಂನಜ್ಜಿ ಎದ್ದರು ಅಂತ ಅರ್ಥ ... ಅವರ ರಾಮ ನಾಮದ ಜಪ ಯಾವುದೇ ಎಕ್ಸ್ಪ್ರೆಸ್ ಟ್ರೈನ್ ಗು ಕಮ್ಮಿ ಇಲ್ಲ ... ನಾನು ಅವರಲ್ಲಿ ಯಾವಾಗೂ ಕೇಳೋದು ಇಸ್ಟೊಂದು ಅರ್ಜೆಂಟ್ ಯಾಕಜ್ಜಿ .. ದೇವ್ರು ಎಳ್ಳು ಹೋಗಲ್ಲ ಅಂತ ... ಅದಕ್ಕೆ ಅವರು ಕಣ್ಣು ದೊಡ್ಡದು ಮಾಡಿ ಇನ್ನು ಸ್ಪೀಡಾಗಿ ಹೇಳೋರು .

ಇಂತಿಪ್ಪ ನಂ ಅಜ್ಜಿ ಅವತ್ತು ಬೆಳಗ್ಗೆ ಬೇಗ ಎದ್ದು ರಾಮನಿಗೂ ಎಬ್ಬಿಸಲು ಶುರು ಮಾಡಿದ್ರು. ಅವರು ಎಲ್ಲ ಕೆಲ್ಸನು ಮಾಡೋದು ಸ್ಪೀಡ್ .. ಸಂನಜ್ಜಿ ನ ಅಜ್ಜಿ ಅಂತ ಕರೆದರು ಅವ್ರಿಗೆ ಅಸ್ಟೊಂದು ವಯಸ್ಸು ಆಗಿಲ್ಲ. ಹಲ್ಲು ಇನ್ನು ಗಟ್ಟಿ ಮುಟ್ಟು. ಯಾರೋ ಅಜ್ಜಿಗೆ ಪೇಸ್ಟ್ ಉಪ್ಯೋಗ್ಸಿ ಹಲ್ಲು ಚೆನಗಿರುತ್ತೆ ಅಂದಿದಾರೆ ಅವತ್ತಿನದ ಅದನ್ನ ಭಕ್ತಿಯಿಂದ ಮಾಡ್ತಾ ಇದಾರೆ .

ಇನ್ನು ಮುಂಜಾವು ಕತ್ತಲೆ ಬೇರೆ .. ಹಳ್ಳಿಯಲ್ಲಿ ಕರೆಂಟ್ ಇರೋದೇ ಅಪರೂಪ. ಅಜ್ಜಿ ಎದ್ದಗಿದೆ ಚಿಮಣಿ ದೀಪ ಹಿಡ್ಕೊಂಡು ಬಚ್ಚಲು ವಲೆಗೆ ಬೆಂಕಿ ಹಾಕಲು.... ಹೇಗೋ ಕತ್ತಲಲ್ಲೇ ಹಲ್ಲು ಉಜ್ಜಿ ದೇವರ ಕೊನೆಗೆ ನಡೀತಾ ಇದಾರೆ ಅನ್ಸುತ್ತೆ . ಆದ್ರೆ ಇವತ್ತ್ಯಾಕೋ ರಾಮ ನಾಮ ಕೆಲ್ಸ್ತ ಇಲ್ಲ ಅನ್ನೋದು ಅರ್ಧ ನಿದ್ದೆಯ ನನಗೆ ಗೊತ್ತಾಗಿತ್ತು. ಅಜ್ಜಿ ಎಲ್ಲಾದರು ಬಚ್ಚಲು ಮನೆಗೆ ಹೋದವರು ಬಿದ್ರ ಅಂತ ಹೆದರಿಕೆ .

ಅಸ್ಟೊತ್ತಿಗೆ ಅಮ್ಮ ಎದ್ದು ಹೋಗಿದ್ದು ನೋಡಿದೆ . ಅಡಿಗೆ ಮನೆಯಿಂದ ಕಣ ಕಣ ಶಬ್ದ ಬಂತು. ಹಗೆ ಅಜ್ಜಿ ಯಾರಿಗೋ ಶಾಪ ಹಾಕುತ್ತಿದ್ದ ಶಬ್ದವು ಕೇಳಿಸಿತ್ತು. ಏನೇ ಅಗಲಿ ಅಜ್ಜಿಗೆ ಏನು ಆಗಿಲ್ಲ ಅಂತ ಮತ್ತೆ ನಿದ್ದೆಗೆ ಜಾರಿ ಹೋದೆ . ಮಾಣಿ ಬಡಿಗೆ ತಗಂಡ್ ಬರವ ಎದ್ಕತ್ಯ ಅಂತ ಯಾವಾಗ ಅಮ್ಮನ ಫರ್ಮನು ಬಂತೋ ಎರಡೇ ನಿಮಿಷದಲ್ಲಿ ತಿಂಡಿಗೆ ಕೂತಗಿತ್ತು. ಸುತ್ತಲು ನೋಡಿದರೆ ಅಜ್ಜಿಯ ಸುಳಿವೇ ಇಲ್ಲ ರಾಮ ನಾಮವು ಇಲ್ಲ.

ಎರಡು ದೋಸೆ ತಿನ್ದಗಿತ್ತು ಅಜ್ಜಿಯ ದರ್ಶನ . ಮನ್ಸಲ್ಲ್ಲೇ ಕುಶಿ ಆಯಿತು ಏನು ಆಗಿಲ್ಲ ಅಂತ. ಹಾಗೆ ಅಜ್ಜಿಯ ಕೆಣಕುವ ಅಂತ ಕೆಟ್ಟ ಬುದ್ದಿ ಬಂತು. " ಎಂತದೆ ಸಂನಜ್ಜಿ ಬೆಳಗಿಂದ ಜಪ ನೆ ಕೇಳಿದ್ನಿಲ್ಲೆ ರಾಮಂಗೆ ಬೇಜಾರ ಬಂದೊತಡನೆ" ಅಂದೇ. ಅದಕ್ಕೆ ಅಜ್ಜಿ " ಎಲ್ಲ ನಿನ್ನ ಅಪ್ಪನದು ಕೆಲಸ ಒಂದು ಸಾಮಾನು ಎಲ್ಲಿ ಇದವು ಹೇಳಿ ಗೊತ್ತಾಗ್ತಿಲ್ಲೆ"

ಅರೆ ಅಜ್ಜಿ ಯಾಕೆ ಹೀಗೆ ಅಂದ್ರು ಅಂತ ಅಮ್ಮಂಗೆ ಕೇಳಿದೆ. ಆಮೇಲೆ ಗೊತ್ತಾಯ್ತ ಅಜ್ಜಿ ಬೆಳಗ್ಗೆ ಕತ್ತಲಿನಲ್ಲಿ ಗಡಿಬಿಡಿಯಿಂದ ಹಲ್ಲು ಉಜ್ಜಲು ಪೇಸ್ಟ್ ಹಾಕಿದರು. ಸ್ವಲ್ಪ ಜಾಸ್ತಿ ಚೊಕ್ಕ ಅಗಲಿ ಅಂತ ಧಾರಾಳವಾಗಿ ಪೇಸ್ಟ್ ಹಾಕಿದರು. ಯಾವಾಗ ಬಾಯಿಗೆ ಹಾಕಿ ಉಜ್ಜಲು ಶುರು ಮಾಡಿದ್ರೋ ಅವಾಗ ತಗೋ ಉರಿ, ಘಾಟು ಶುರುವಾಯಿತು .. ಉರಿ ತಳರದೆ ರಾಮ ನಾಮ ಮರೆತೋಗಿತ್ತು. ಅದೇ ಉರಿಯಲ್ಲಿ ಓಡಿ ಅಡುಗೆಮನೆಯ ಸಕ್ಕರೆ ಡಬ್ಬ ಖಾಲಿಯಾಗಿತ್ತು.

ಪಾಪ ಸಂನಜ್ಜಿ ಕತ್ತಲೆಯಲ್ಲಿ ಪೇಸ್ಟ್ ಬದಲು ಅಲ್ಲೇ ಇತ್ತಿದ ನಂ ಅಪ್ಪನ ಶೇವಿಂಗ್ ಕ್ರೀಂ ಹಚ್ಚಿದ್ರು !!!!

ಅವತ್ತಿಂದ ಅವರ ಹಲ್ಲುಜ್ಜುವ ಉತ್ಸಾಹ ಕಡಿಮೆ ಆಗಿತ್ತು ಸ್ವಲ್ಪ ಇನದಲ್ಲೇ ಹಲ್ಲೆಲ್ಲ ಹೋಗಿ ಹಲ್ಲು ಸೆಟ್ ಬಂದೂ ಆಗಿತ್ತು .. ಆದರು ಈಗಲೂ ಅಜ್ಜಿಯನ್ನು ಆ ವಿಷಯವಾಗಿ kaadisodu ಇದೆ ...

1 comments:

ಶರತ್ ಹೆಗಡೆ said...

Hi sharath,

I read ur blog. Its nice. U have really a good writing ability. Narration is superb.
Ajjiya toothpaste i liked a lot. even makki manja.There are a few typing errors. Pay some attention to that also.
Please do continue writing. All the best

Regards,
Venki