Tuesday, November 17, 2009

ದಾರಿ ತಪ್ಪಿದ ಪ್ರೇಮಿ

ಚಳಿಗಾಲದ ದಿನಗಳಲ್ಲಿ ಕಶ್ಮೀರ ಕನಸಿನ ಲೋಕದಂತೆ ಕಂಗೊಲಿಸುತ್ತಿರುತ್ತೆ. ದೊಡ್ಡ ದೊಡ್ಡ ಕಣಿವೆ . ಆ ಸುಂದರ ಕಣಿವೆಯ ಸುತ್ತಲು ಚಿನಾರ್ ಮರಗಳ ತೋಟ . ಮರ ನೋಡಲು ಬಹಳ ಸುಂದರ.ಕಾಶ್ಮೀರದ ಸ್ವರ್ಗ ಸೌಂದರ್ಯಕ್ಕೆ ಪರಿಭಾಷೆ ಅದು. ದೊಡ್ಡ ದೊಡ್ಡ ಬಣ್ಣ ಬಣ್ಣದ ಎಲೆಗಳಿಂದ ಅದು ನೆಲವನ್ನೆಲ್ಲಾ ತುಂಬಿ ಒಂದು ಬಣ್ಣದ ಹಾಸಿಗೆಯಂತೆ ಕಾಣುತ್ತೆ .ಇಂಥ ಮರಗಳ ಮಧ್ಯೆ ಜನರ ಮನೆಗಳು. ಅದು ಇತರ ಕಾಶ್ಮೀರದ ಹಲ್ಲಿಗಳಂತೆ ಒಂದು ತರಹ ನಿದ್ರಿಸುವ ಹಳ್ಳಿ. ಬಹಲ್ ಜನಸಂಖೆ ಇಲ್ಲದೆ ಎಲ್ಲ ಖುಷಿಯಾಗಿ ಇರುವ ಊರು.


ಅವತ್ತು ಸುಮಿತ್ ಅವತ್ತು ಶಾಲೆಗೆ ಹೋಗಲು ರೆಡಿ ಆಗ್ತಾ ಇದ್ದ. ಸುಮಿತ್ ಆ ಹಳ್ಳಿಯಲ್ಲಿ ಇರುವ ಕೆಲವೇ ಕೆಲವು ಪಂಡಿತರ ಮನೆಯ ಹುಡುಗ. ಒಳಗಿಂದ ಅಮ್ಮ ಸಂಜೆಯ ಉರುವಲಿಗೆ ಚಿನಾರ್ ಮರಗಳ ಒಣ ಉರುವಳನ್ನು ತರಲು ಹೇಳಿಯಾಗಿತ್ತು. ದೊಡ್ಡವನಾದಾಗ ಡಾಕ್ಟರ ಆಗುವ ಕನಸಿನಿಂದ ಅವನ ರಾತ್ರಿ ಕಳೆಯುತ್ತಿತ್ತು ಬೆಳಗಾದಾಗ ಅಮ್ಮನ ಕೂಗು ವಾಸ್ತವತೆಯ ನೆನಪು ಮಾಡಿಸುತ್ತಿತ್ತು. ಒಲ್ಲದ ಮನಸಿನಿಂದ ಮರಗಳ ಕಡೆ ಹೋಗುತ್ತಿದ್ದ.ಅಲ್ಲಿ ಬರುತ್ತಿದ್ದ ಇತರ ಹುಡುಗರೊಂದಿಗೆ ಆರಿಸುತ್ತ ಮ್ಯಾನೇಜ್ ಬರುವಸ್ಟರಲ್ಲಿ ಶಾಲೆಗೆ ಹೋಗಲು ಸಮಯವಾಗುತ್ತಿತ್ತು.

ಸಂಜೆ ಮನೆಗ ಬಂದಾಗ ಅಲ್ಲೇ ಆಡಲು ಬರುತ್ತಿದ್ದರು. ಹೀಗೆ ಚಿನಾರ್ ಮರಗಳ ಸುತ್ತ ಅವನ ಜೀವನ ಕಳೆದಿತ್ತು . ಹೀಗೆ ನೋಡು ನೋಡುತ್ತಿದ್ದಂತೆ ನಮ್ಮ ಸುಮಿತ್ ೧೮ ವರ್ಷದವನಾಗಿದ್ದ . ಸಮಯ ಕಳೆಯಲು ಎಲ್ಲರು ಅಲ್ಲೇ ಒಟ್ಟಾಗುತ್ತಿದ್ದರು. ಅಲ್ಲಿಗೆ ಬಂದರೆ ಕ್ರಿಕೆಟ್ ಆಡುತ್ತ ಇನ್ನೊಬ್ಬರ ಜೊತೆ ಬೆಟ್ ಕಟ್ಟುತ್ತ ಸಮಯ ಕಳೆಯುತ್ತಿತ್ತು. ಅವತ್ತೊಂದಿನ ಅವನಿಗೆ ಅಲ್ಲಿ ಅನಿರೀಕ್ಷಿತ ನೋಟ.ಅವನು ಆಕೆಯನ್ನು ಅದೇ ಮೊದಲ ಸಲ ನೋಡಿದ್ದು. ಅವಳಂಥ ಸುಂದರಿಯನ್ನು ಅವನು ನೋಡಿಯೇ ಇರಲಿಲ್ಲ . ಆಕೆ ತನ್ನ ದೊಡ್ಡಪ್ಪನ ಮಗನಅನ್ನು ಮನೆಗೆ ಕರೆಯಲು ಬಂದಿದ್ದಳು . ಅವಳು ಜ್ಹಹೀರನ್ ತಂಗಿ ಅಂತ ಆಮೇಲೆ ಬೇರೆಯವರ ಹತ್ತಿರ ಕೇಳಿ ತಿಳಿದಿದ್ದ. ಅದೇ ಹಳ್ಳಿಯ ಹತ್ತಿರದ ಪೇಟೆಯಲ್ಲಿ ಕಾಲೇಜಿಗೆ ಸೇರಲು ಬಂದಿದ್ದಳು . ಜಹೀರನ ಮನೆಯಲ್ಲೇ ಅವಳ ಮುಂದಿನ ವಾಸ್ತವ್ಯ ಅಂತ ಗೊತ್ತಾದಾಗ ಅವನಿಗೆ ಎಲ್ಲಿಲ್ಲದ ಖುಷಿ.ತನ್ನ ಮನಸಲ್ಲೇ ಆಕೆಯ ಚಿತ್ರವನ್ನು ಮೆಲುಕು ಹಾಕುತ್ತ ಮನೆಗೆ ಸೇರಿದ್ದ.

ಸುಮೀಥನು ನೋಡಲು ಸುಂದರಾಂಗ.ಕಾಲೇಜಿನಲ್ಲಿ ಅವನಿಗಾಗಿ ಮುಗಿ ಬೀಳುವವರು ಬಹಳ್. ವಿಧ್ಯಾರ್ಥಿ sanghada ಅಧ್ಯಕ್ಷನಾಗಿ ಬಹಳ ಹೆಸರನ್ನು ಮಾಡಿದ್ದ. ಅಂತ ನಮ್ಮ ಸುಮಿಥ್ನಿಗೆ ಆಕೆ ಅದೆಸ್ಟು ಹಿಡಿಸಿದ್ದಳೆಂದರೆ ತಾನು ಇನ್ನು ಬದುಕೊದಿದ್ದರೆ ಅವಳಿಗೆ ಅಂತ ತೀರ್ಮಾನಿಸಿಯಾಗಿತ್ತು . ಅವಳನ್ನು ಹೇಗೆ ಮಾತನಾಡಿಸೋದು ಅಂತ ರಾತ್ರಿಯೆಲ್ಲಾ ಯೋಚಿಸಿ ನಿದ್ದೆ ಹಾಳು ಮೊಡ್ಕೊತಿದ್ದ.ಆಕೆ ಮಾತ್ರ ಬಹಳ ಒಂಟಿ. ಮಾತನಾಡುವುದೇ ಬಹಳ ಕಡಿಮೆ. ಅವಳ ಗುಣವೇ ಹಾಗೋ ಮನೆಯವರ ಎಚ್ಚರಿಕೆಯೂ ತಾನಾಯಿತು ತನ್ನ ಕ್ಲಾಸಯಿತು ಅಂತ ಇದ್ದವಳು.ಅಂತು ಒಂದು ದಿನ ಸುಮಿತ್ ಧೈರ್ಯ ತಂದು ಅವಳನ್ನು ಹೋಗಿ ಮಾತನಾಡಿಸಿಸ್ದ. ಆದ್ರೆ ಅವನನ್ನು ನೋಡಿ ಮುಗಿ ಬೀಳೋ ಹುಡ್ಗೀರು ಇರೋವಾಗ ಆಕೆ ಮಾತ್ರ ಅವನನ್ನು ನೋಡದೆ ನಡೆದೇ ಬಿತ್ತ್ಸ್ಲು.

ಅವನಿಗೆ ಆದ ಆಶ್ಚರ್ಯ ಅಸ್ತಿಟ್ತಲ್ಲ. ಆಕೆ ಯಾಕೆ ಹೀಗೆ ಮಾಡಿದ್ಲು ಅಂತ ಎಲ್ಲರನ್ನು ಕೇಳಿ ಯಾಗಿತ್ತು.ಯಾರೋ ಅಂದರು " ಯಾಕೋ ನಿಂಗೆ ಸುಮ್ನೆ ಹುಚ್ಚು ಆಕೆ ಮುಸ್ಲಿಂ ನೀನು ಪಂಡಿತ್ . ನಿನ್ನತ್ರ ಯಾಕಪ್ಪ ಮಾತಾಡ್ತಾಳೆ " ಅಂದರು . ಅವನಿಗೆ ಆಗ ಅದು ನಿಜವೂ ಇರಬಹುದು ಅನ್ನಿಸಿತು. ಇಡೀ ಜನರ ಮೇಲೆ ಸಿಟ್ಟು ಬಂತು. ಯಾಕೆ ಈ ಜಾತಿ ಧರ್ಮ ಅಂತ ಇದೆ. ಇಲ್ಲನ್ದಿದ್ರೆ ಇಸ್ಟೊತ್ತಿಗೆ ಆಕೆ ನನ್ನಲ್ವಾಳಗ್ತಿದ್ಲು ಅಂತ.ಈಗಲೇ ಈ ಜಾತಿವಾದಿಗಳನ್ನೆಲ್ಲ ಕೊಲ್ಲೋ ಅಸ್ಟು ಸಿಟ್ಟು ಬಂದಿತ್ತು.ಅವಳಿಗೂ ಅಸ್ಟೆ ಇವನನ್ನು ಮಾತನಾಡಿಸೋ ತವಕ ಆದರೆ ಅವರ ಮನೆಯವರು ಧರ್ಮದವರು ಬಿಡಬೇಕಲ್ಲ . ತನ್ನಿಂದಾಗಿ ಎಲ್ಲಿ ಅವನನ್ನು ಸಯಿಸಿಬಿಡ್ತಾರೋ ಅಂತ ಹೆದರಿ ಆಕೆಯೂ ಸುಮ್ಮನಿದ್ದಳು.

ಇದೆಲ್ಲ ತಿಳಿಯದ ಇವನು ದಿನೇ ದಿನೇ ಆಕೆಯ ಹುಚ್ಚು ಬೆಳೆಸಿಕೊಂಡ. ಅವಳನ್ನು ನೋಡದೆ ಇದ್ದರೆ ಆಗುವ ತವಕ ಅಸ್ತಿಟ್ತಲ್ಲ.ಹೀಗೆ ದಿನೇ ದಿನೇ ಆಕೆಯನ್ನು ಮಾತನಾಡಿಸೋ ಪ್ರಯತ್ನ ನಾಡಿದೆ ಇತ್ತು . ತನ್ನಿನ್ದೆನದ್ರು ತಪ್ಪಯ್ತ ?? ಆಕೆ ಕೇವಲ ಮುಸ್ಲಿಂ ಯೌವಕರನ್ನೇ ಪ್ರಿತಿಸೋದ?? ತಾನೂ ಅವರಂತೆ ಉದ್ದನೆಯ ಗಡ್ಡ ಬಿಟ್ಟು ಮೀಸೆ ತೆಗೆದರೆ ಹೇಗೆ ಅಂತ ಯೋಚಿಸಿದ . ತನ್ನ ಹೊಸ ವೇಷದಿಂದ ಆಕೆಯನ್ನು ಪಡೆಯಲು ನೋಡಿದ .. ಊಹೂನ್ ಆಕೆ ಅದ್ರು ಮಾತಾಡಿಸಲಿಲ್ಲ. ಒಂದು ದಿನ ಆಕೆ ಕ್ಯಾಂಟೀನ್ ನಲ್ಲಿ ಮಾಂಸಾಹಾರ ತಿನ್ನೋದು ನೋಡಿದ. ಆಗೇ ಹೊಳೆದದ್ದು ತಾನು ಸಸ್ಯಾಹಾರಿ ಅದಕ್ಕೆ ಅವಳು ತನ್ನನ್ನ ಇಷ್ಟ ಪಡುತ್ತಿಲ್ಲ ಅಂತ.'

ದಿನೇ ದಿನೇ ಇಸ್ಟವಿಲ್ಲದಿದ್ದರೂ ಮಾಂಸಾಹಾರ ತಿನ್ನತೊಡಗಿದ. ಮೊದ ಮೊದಲಿಗೆ ವಾಂತಿ ಬಂತು .. ಆದರೆ ಅವಳ ಮೇಲಿನ ಪ್ರೀತಿ ಎಲ್ಲವನ್ನು ತಿನ್ನಿಸಿತು . ಯಾರೋ ಹೇಳಿದರು ಅಂತ ತನ್ನ ಧರ್ಮಕ್ಕೆ ಪೂಜ್ಯವಾದ ಗೋಮಾಂಸವನ್ನು ತಿಂದ. ಹಾಗೆ ಅವನಲ್ಲಿ ಆಗ್ತಿರೋ ಬದಲಾವಣೆ ಆಕೆಗೆ ಮುಟ್ಟುವಂತೆ ನೋಡಿದ. ಜಪ್ಪಯ್ಯ ಅಂದರು ಆಕೆ ಇವನನ್ನು ಮಾತನಾಡಿಸಲಿಲ್ಲ .

ಅಸ್ಟರಲ್ಲಿ ಇವನ ಕಾಲೇಜ್ ಜೀವನವು ಹಲಗಿತ್ತು. ಕ್ಲಾಸ್ಸಲ್ಲಿ ಫೈಲ್ ಅಗತೊಡಗಿದ. ಮನೆಯಲ್ಲಿ ಬಡತನ ಹೆಚ್ಚಾಗತೊಡಗಿತು. ಪಂಡಿತ ಮನೆಯವನದ್ದರಿಂದ್ ಯಾರೂ ಅವರಿಗೆ ಕೆಲಸ ಕೊಡುತ್ತಿರಲಿಲ್ಲ. ತನ್ನ ಬಡತನದಿಂದ ಆಕೆ ತನ್ನನ್ನು ಮಾತನಾಡಿಸುತ್ತಿಲ್ಲ ಅಂದ್ಕೊಂಡ. ಪಾಪ ಅವನಿಗೇನು ಗೊತ್ತು ಅವಳೆನದ್ರು ಅವನ ಹತ್ತಿರ ಮಾತನಾಡಿದರೆ ಅವನ ಜೀವಕ್ಕೆ ಸಂಚಕಾರ ಎಂದು.

ಅಸ್ತೋತ್ತಿಗಾಗಲೇ ಅಲ್ಲಿ ಭಯೋತ್ಪಾದಕರ ಕಾಟ ಜಾಸ್ತಿಯಾಗಿತ್ತು. ಕಾಲೇಜಿನಲ್ಲಿ ಸಿಗುವ ಯುವಕರ ಮೇಲೆ ಅವರ ಕಣ್ಣು. ಎಸ್ಟೋ ಮುಸಲ್ಮಾನ್ ಹುಡುಗರು ಅವರ ಧರ್ಮ ಅಂಧತೆ ಬಲೆಗೆ ಬಿದ್ದು. ಅವರೊಂದಿಗೆ ಸೇರಿಯಾಗಿತ್ತು. ಆದರೆ ಅವರಿಗೆ ಸೇನಪದೆಯದ್ದೆ ತೊಂದರೆ. ತಮ್ಮನ್ನು ಅನುಮಾನದಿಂದ ನೋಡುವ ಅವರಿಗೆ ಸಿಕ್ಕಿಬೀಳುವುದು ಖಂಡಿತ ಅಂತ ಅವರಿಗೆ ಗೊತ್ತಿತ್ತು.

ಅದಕ್ಕಾಗಿ ಅವರಿಗೆ ಅನುಮಾನ ಬರದೆ ಇರುವಂತವರು ಬೇಕಾಗಿತ್ತು. ದುಡ್ಡಿನ ಆಸೆಗೆ ಯಾರದ್ರು ಹಿಂದೂ ಹುಡುಗರು ತಮ್ಮೊಂದಿಗೆ ಸೇರುತ್ತರ ಅಂತ ನೋಡಿಯಾಯಿತು. ಹಾಗಾಗಿದ್ದರೆ ಅವರಿಗೆ ಕೆಲಸ ಬಹಲ್ ಸುಲಭ. ಅನುಮಾನ ಬರದಂತೆ ಕೆಲಸ ಮುಗಿಸಬಹುದು. ಆದ್ರೆ ಯಾರು ಸಿಗ್ತಾ ಇರಲಿಲ್ಲ. ಆದರೆ ಒಂದು ದಿನ ಯಾರೋ ಅವರಿಗೆ ಸುಮಿಥನ ಪ್ರೀತಿಯ ವಿಚಾರ ತಿಳಿಸಿದರು.

ಅವರು ಅದೇ ನಮ್ಮ ಹೀರೋವಿನ ಕನಸಿನ ರಾಣಿಯನ್ನು ಅವಳ ಮನೆಯಲ್ಲಿ ಭೇಟಿ ಮಾಡಿದರು. ಅವಳಿಗೆ ಏನೋ ಗುಪ್ತ ಕೆಲಸವನ್ನು ವಹಿಸಲು ಪ್ರಯತ್ನಪಟ್ಟರು. ಆದರೆ ಅವಳ ಪ್ರತಿಭಟನೆ ನೋಡಿದರೆ ಆಕೆ ಅದಕ್ಕೆ ಒಪ್ಪುತ್ತಿಲ್ಲ ಅಂತ ಗೊತ್ತಾಗುತ್ತಿತ್ತು. ಕೊನೆಗೆ ಅವಳ ಧರ್ಮಂದ ತಂದೆ ಭಯೋತ್ಪಾದಕರ ಮಾತಿಗೆ ಒಪ್ಪಿ ಆಕೆಯ ಬಳಿ ಆ ಕೆಲಸವನ್ನು ಮಾಡಲು ದಬಾಯಿಸಿದ. ಇಲ್ಲವಾದರೆ ಸುಮಿಥನನ್ನು ಕೊಲ್ಲುವ ಬೆದರಿಕೆಯನ್ನು ಒಡ್ಡಿದ. ಆಕೆಗೇನು ಗೊತ್ತು ಪಾಪ ಇದೆಕ್ಕೆಲ್ಲ ಒಪ್ಪಿದರೆ ಮುಂದೆ ಏನಾಗುತ್ತೆ ಅಂತ. ಪಾಪ ಒಳ್ಳೆಯವ ಬದುಕಲಿ ಅಂತ ಆ ಕೆಲ್ಸಕ್ಕೆ ಒಪ್ಪಿದಳು.

ಮರುದಿನ ಕೊಲ್ಲೆಜಿನಲ್ಲಿ ಆಕೆಯೇ ಬಂದು ಈತನನ್ನು ಮಾತನಾಡಿಸಿದಳು . ಇವನಿಗೆ ಸ್ವರ್ಗವೇ ಸಿಕ್ಕಂತಾಗಿತ್ತು. ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಖುಷಿಗೆ ಹುಚ್ಚನಗುತ್ತಿದ್ದನೇನೋ ?? ಅಂತೂ ಅವನ ಖುಷಿಗೆ ಪರವೇ ಇರಲಿಲ್ಲ. ಅವಳು ಆ ಸಮಯದಲ್ಲಿ ನೀರಿಗೆ ಹರು ಅಂದರು ಹಾರಿಬಿದುತ್ತಿದ್ದನೇನೋ !!! ಆಕೆ ಅವನಿಗೆ ಹೇಳಿದ್ದಸ್ತೆ " ನಾನು ನಿನಗೆ ಬೇಕು ಅಂದರೆ ಜಿಹಾದ್ ಸೇರಿಕೋ ಅಂತ" ಅಸ್ಟೆ ಮುಗಿತು . ಅವಳು ಕೆಲಸವನ್ನು ಮುಗಿಸಿಯಾಗಿತ್ತು. ಇವನ ಮೇಲಿನ ಪ್ರೀತಿಯೇ ಅವಳಿಂದ ಅದನ್ನು ಹೇಳಿಸಿದ್ದು.


ಇವನಿಗೆ ಧಡಾರನೆ ಸ್ವರ್ಗದಿಂದ ಬಿದ್ದಂತೆ ಭಾಸ ವಾಗಿತ್ತು. ಆದರೆ ಆಕೆಯ ಮೇಲಿನ ಪ್ರೀತಿ ಅವನಿಂದ ಏನು ಬೇಕಾದರೂ ಮಾಡಿಸುವಂತಿತ್ತು. ಇದೆ ಆ ದೇಶದ್ರೋಹಿಗಳ ಪ್ಲಾನ್. ಮರುದಿನವೇ ಸ್ವಲ್ಪ ಜಿಹಾದಿಗಳು ಅವನನ್ನು ಭೇಟಿಯಾಗಿ ಸ್ವಲ್ಪ ದುಡ್ಡನ್ನು, ಅವನ ಕೆಲಸವನ್ನು ತಿಳಿಸಿ ಹೋಗಿದ್ದರು. ದಿನೇ ದಿನೇ ಅವನು ನಿಯತ್ತಿನಿಂದ ತನಗೆ ವಹಿಸಿದ್ದ ಕೆಲಸ ಮಾಡತೊಡಗಿದ.
ಸೇನಾ ವಿಚಾರಗಳು ಸುಲಲಿತವಾಗಿ ಅವರ ಕೈ ಸೇರುತ್ತಿತ್ತು. ಆದರೆ ತಾನು ಮಾದ್ತೋ ಇರೋ ಕೆಲಸಕ್ಕೆ ಆಕೆ ಇನ್ನು ಖುಷಿ ಪದಲಿಲ್ವಲ್ಲ ಅಂತ ಅವನಿಂಗೆ ಅನ್ನಿಸತೊಡಗಿತು.

ದಿನೇ ದಿನೇ ಅವನ ತಾಳ್ಮೆ ಕಳೆಯತೊಡಗಿತು. ಅವತ್ತು ರಾತ್ರಿ ದೇಶದ್ರೋಹಿಗಳು ಅವನನ್ನು ಆತ್ಮಾಹುತಿ ಕೆಲಸಕ್ಕೆ ಕಳಿಸುವವರಗಿದ್ದರು . ಇದೆ ತನ್ನ ಜೀವನದ ಕೊನೆ ಅಂತ ಅವನಿಗೆ ಅನ್ನಿಸತೊಡಗಿತು. ಆದರೋ ಆಕೆ ತನ್ನನ್ನು ಪ್ರೀತುಸುತ್ತಲೇ ಅಂತ ಕೇಳಿದರೆ ಸಾಕು ತಾನು ಏನು ಮಾಡಲು ಸಿದ್ದ ಅಂತ ಮನಸ್ಸು ಗಟ್ಟಿ ಮಾಡಿಕೊಂಡಿದ್ದ. ಸಾಯುವ ಮುಂಚೆ ಆಕೆಯನ್ನು ಮಾತಾಡಿಸಿ ಹೋಗಣ ಅಂದ ಅವಳ ಮನೆಗೆ ಬಂದಿದ್ದ.

ಆದರೆ ಆಕೆಯ ಬಾಯಿಂದ ಕೇಳಿದ್ದೆ ಬೇರೆ . ತನ್ನನ್ನು ದೇಶದ್ರೋಹಿಯನ್ನಗಿ ಮಾಡಲು ರೂಪಿಸಿದ ಸಂಚನ್ನು ಕೇಳಿ ತಲೆ ಗಿರ್ರನೆ ತಿರುಗಿತು. ತಾನು ಮಾಡಿದ ತಪ್ಪಿನ ಅರಿವಾಗತೊಡಗಿತು. ಆದ್ರೆ ಕಾಲ ಮಿಂಚಿತ್ತು. ಸೇನಾ ಪಡೆಯ ತುಕಡಿಯ ಮೇಲೆ ಯುದ್ದಕ್ಕೆ ಎಲ್ಲರೂ ಹೊರಟಿದ್ದರು. ಅದಕ್ಕೆ ಅವನೇ ದಾರಿ ತೋರಿಸುವವ. ತಲೆಯಲ್ಲಿ ಅದೇನು ಬಂತೋ .. ಸೀದಾ ಎಲ್ಲರನ್ನು ಕರೆದುಕೊಂಡು ಹೊರಟೆ ಬಿಟ್ಟ.

ದಾರಿಯುದ್ದಕ್ಕೂ ಆಕೆಯದೇ ಚಿಂತೆ. ಎಸ್ಟೆಲ್ಲ ಆದರು ಆಕೆಗೆ ತನ್ನ್ನ ಮೇಲಿನ ಪ್ರೀತಿ ಕೇಳಿ ಅವನಿಗೆ ಖುಷಿಯಾಗಿತ್ತು. ತನು ಇನ್ನು ಇದ್ದರು ಒಂದೇ ಸತ್ತರು ಒಂದೇ ಅನ್ನಿಸಿತ್ತು. ಸೇನಾ ತುಕಡಿ ಹೋಗುತ್ತಾ ಇರೋದ ಕಾಣಿಸ್ತಾ ಇದೆ. ಇದ್ದಕ್ಕಿದ್ದಂತೆ ಗುಂಡಿನ ಸದ್ದು. ಸೇನಾ ತುಕಡಿ ಅಲ್ಲೇ ಇದ್ದ ಒಬ್ಬನೇ ಭಯೋತ್ಪದಕನನ್ನ ಹೊಡೆದು ಆಗಿತ್ತು. ನಮ್ಮ ಸುಮೀತ್ ವೀರ ಮರಣವನ್ನು ಅಪ್ಪಿದ್ದ.

ಅರೆ ನಾನೇಕೆ ಹೀಗೆ ಅಂತ ಇದ್ದೇನೆ ಅದು ಒಬ್ಬ ದೇಶ್ದ್ರೋಹಿಗೆ ಅಂದ್ಕೊಂಡ್ರ?? ಆತ ಅಲ್ಲಿಗೆ ಬಂದಾಗ ಸೇನೆಯ ಮೇಲೆ ಗುಂಡು ಹರಿಸೋ ಬದಲು ತನ್ನೊಂದಿಗಿದ್ದ ಎಲ್ಲ ಜಿಹಾದಿಗಳ ಮೇಲೆ ಗುಂಡು ಹಾರಿಸಿದ್ದ. ಎಲ್ಲರನ್ನು ಅಲ್ಲೇ ಯಮಲೋಕಕ್ಕೆ ಕಳಿಸಿದ್ದ.
ಗುಂಡಿನ ಸದ್ದು ಕೇಳಿದ ಸೇನೆಯೌ ಉತ್ತರ ನೀಡಿತ್ತು. ಆದರೆ ನಮ್ಮ ಸುಮೀತ್ ಸತ್ತಿದ್ದು ಸೇನೆಯ ಗುಂಡಿನಿಂದನೋ ಅಥವಾ ಭಯೋತ್ಪಾದಕರ ಗುಂಡಿನಿಂದನೋ ಗೊತ್ತಿಲ್ಲ . ಆದರು ಸುಮೀತ್ ಸಾಯೋ ಮೊದಲು ದೇಶ ಸೇವೆ ಮಾಡಿದ್ದ. ಸೇನಾ ಪಡೆಗಳು ಆರು ಜನರನ್ನು ಗುಂಡಿಕ್ಕಿದ್ದು ಸುದ್ದಿಯಾಯಿತು .. ದೇಶದಲ್ಲಿ ಮೊದಲ ಬಾರಿಗೆ " ಹಿಂದೂ ಭಯೋತ್ಪಾದಕನನ್ನು"
ಸೇನಾ ಪಡೆಯವರು ಹೊಡೆದುರುಲಿಸಿದ್ದರು


14 comments:

chintamani said...

Good one....

Vikas G B said...

bahala channagide.

Keep posting

satish hunasikatti said...

nice story... u can approach any film producer :)...

akshay said...

super story...very good...

sneha said...

tumba andre tumbane chanagide, nija heltini 10 minits nannanna naane martu bittidde.

asha said...

hey chanagide kano story....
idhe tharad stories post madta iru..

Chethan Hegde said...

Good work sharath... Keep it up...

ಶರತ್ ಹೆಗಡೆ said...

Thanks for your feed backs.. will post more in future... dont forget to check out old stories also :)

Bharath de Waste said...

Sooper amma.. Kashmiri Pandit Love story? :D .. Inspiration?

sangli said...

maga its really good :) .. good one at last :P .. keep posting like this one ... :)

sneha said...

ondu vishaya idu nimma own story na?

ಶರತ್ ಹೆಗಡೆ said...
This comment has been removed by the author.
Bharath de Waste said...

First be in love, then U ll know whether its possible to think rationally anta ;)

Emperor said...

forgotten to follow. But today i did. close the chapter with a smile. Nice one.